1) ನನ್ನ ಮನೆ" ಯೋಜನೆಯ ಪಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿ-ಸಿಂಗನಾಯಕನಹಳ್ಳಿ, ಬೆಂಗಳೂರು
2) Tender for Group insurance & personal accidentalinsurance
3) Quotation for printing letter,visitingcardನಮ್ಮ ಬಗ್ಗೆ


ನಿಗಮವು ಕಂಪನಿ ಕಾಯ್ದೆ ಪ್ರಕಾರ ನೊಂದಾಯಿತ ಸರ್ಕಾರಿ ಸ್ವಾಮ್ಯದ ಒಂದು ಉದ್ದಿಮೆಯಾಗಿದ್ದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗಾಗಿ ವಸತಿ ಸೌಲಭ್ಯವನ್ನು ಕಲ್ಪಿಸುವುದಕ್ಕಾಗಿ 2000ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿದೆ. ಇದು ರೂ.10 ಕೋಟಿಗಳ ಅಧಿಕೃತ ಷೇರು ಬಂಡವಾಳ (Authorised Capital)ಹೊಂದಿದ್ದು, ರೂ.3 ಕೋಟಿಗಳ ಪಾವತಿಯಾದ ಷೇರು ಬಂಡವಾಳವನ್ನು (Paid up Capital)ಹೊಂದಿರುತ್ತದೆ.

ಉದ್ದೇಶ


• ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ಸ್ವ ಸಹಾಯ ಪದ್ಧತಿ ಮೂಲಕ
  ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
• ವಿದ್ಯುನ್ಮಾನ ತಂತ್ರಜ್ಞಾನದ ಬಳಕೆಯಿಂದ ಹಣ ವರ್ಗಾವಣೆ ಪದ್ದತಿ (Electronic Fund Transfer System) ಮೂಲಕ ಫಲಾನುಭವಿಗಳ ಖಾತೆಗೆ ನೇರ ಅನುದಾನ ಬಿಡುಗಡೆ.
• ಅಗ್ಗ ಕಟ್ಟಡ ಸಾಮಗ್ರಿಗಳನ್ನು ಸಂಘಟಿತ ಉತ್ಪಾದನೆಯಿಂದ ಅಥವಾ ಬೃಹತ್ ಸಂಗ್ರಹಣೆ ಮೂಲಕ ಪಡೆಯುವುದು.

ಧ್ಯೇಯೋದ್ದೇಶಗಳು


• ರಾಜ್ಯಾದ್ಯಂತ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ವಸತಿ ಯೋಜನೆಗಳಡಿ ವಸತಿ
  ಸೌಕರ್ಯವನ್ನು ಒದಗಿಸುವುದು
• ಗ್ರಾಮ ಪಂಚಾಯತಿ ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಪಾಲುಗಾರಿಕೆ.
• ಸ್ವ ಸಹಾಯದ ಮೂಲಕ ಜನರಿಗೆ ಕಟ್ಟಡ ಸಾಮಗ್ರಿಗಳು, ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಆಯ್ಕೆ ಮಾಡಲು ಅವಕಾಶ ನೀಡುವುದು.
• ಗ್ರಾಮಾಂತರ ಪ್ರದೇಶಗಳಲ್ಲಿ ಮಿತವ್ಯಯಕಾರಿ ಹಾಗೂ ಬಲಯುತವಾದ ಬಾಳಿಕೆಯಿರುವ ಕಟ್ಟಡ ಸಾಮಗ್ರಿಗಳನ್ನು ಬಳಸಿ ನೂತನ ತಂತ್ರಜ್ಞಾನಗಳೊಂದಿಗೆ ಉತ್ತಮ
  ಮನೆಗಳನ್ನು ನಿರ್ಮಿಸಲು ನಿರ್ಮಿತಿ ಕೇಂದ್ರಗಳನ್ನು ಬಲಪಡಿಸುವುದರ ಮೂಲಕ ಉತ್ತೇಜನ ನೀಡುವುದು.
• ಸಂಪನ್ಮೂಲಗಳನ್ನು ಕ್ರೂಢೀಕರಿಸುವುದು ಹಾಗೂ ಅನುದಾನದ ಮರುಬಳಕೆಯನ್ನು ಖಚಿತಪಡಿಸಿಕೊಳ್ಳುವುದು.
• ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಅನುಷ್ಠಾನಗೊಳಿಸುವುದು.

ಹೊಸ ಹೆಜ್ಜೆಗಳು


• ಮಹಿಳೆಯರನ್ನು ಫಲಾನುಭವಿಯಾಗಿ ಆಯ್ಕೆ ಮಾಡುವ ಮೂಲಕ ಮಹಿಳಾ ಸಬಲೀಕರಣಗೊಳಿಸುವುದು.
• ಗ್ರಾಮ ಪಂಚಾಯತಿಗಳ ಪ್ರಾಯೋಜಕತ್ವದ ವಸತಿ ಯೋಜನೆಗಳನ್ನು ಬೆಂಬಲಿಸುವುದರ ಮೂಲಕ ಗ್ರಾಮ ಪಂಚಾಯತಿಗಳ ಸಾಮರ್ಥ್ಯ ವೃದ್ಧಿಸುವುದು.
• ವಿಶೇಷ ಗುಂಪು ವಸತಿ ಯೋಜನೆಯಡಿ- ವಿಶೇಷ ಆದಾಯ ವರ್ಗಗಳಾದ ಕುಶಲಕರ್ಮಿಗಳಿಗೆ, ನೇಕಾರರಿಗೆ, ಹಮಾಲರಿಗೆ, ಮೀನುಗಾರರಿಗೆ, ಬೀಡಿ ಕಾರ್ಮಿಕರಿಗೆ ಹಾಗೂ
  ಮುಂತಾದವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವುದು.
• ವ್ಯಾಪಕ ಐಟಿ ಬಳಕೆಯ ಮೂಲಕ ಚಟುವಟಿಕೆಗಳನ್ನು ಯೋಜನೆಯ ಕ್ರಮದಲ್ಲಿ ಮೇಲ್ವಿಚಾರಣೆ ಮಾಡುವುದು.
• ನಿಗಮದ ಚಟುವಟಿಕೆಗಳು ಹಾಗೂ ವಸತಿ ಯೋಜನೆಗಳ ಅನುಷ್ಠಾನಗಳ ಎಲ್ಲಾ ಮಾಹಿತಿಯು ಸಾರ್ವಜನಿಕರಿಗೆ ದೊರಕುವಂತೆ ಮಾಡುವುದು.

ಸಾರ್ವಜನಿಕರ ಪಾತ್ರ


ನಿಗಮವು ಸ್ವ ಸಹಾಯ ಪದ್ಧತಿ ಮೂಲಕ ಮನೆಗಳನ್ನು ಫಲಾನುಭವಿಗಳೇ ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸುವ ಸಂಬಂಧ ಈ ಕೆಳಕಂಡಂತೆ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗಿದೆ;

• ಅರ್ಹ ಫಲಾನುಭವಿಗಳ ಆಯ್ಕೆಯನ್ನು ವಸತಿರಹಿತರ ಪಟ್ಟಿಯಿಂದ ಗ್ರಾಮ ಸಭೆಯ ಮೂಲಕ ಅನುಮೋದಿಸುವುದು.
• ಫಲಾನುಭವಿಗಳೇ ಮನೆ ನಿರ್ಮಿಸಿಕೊಳ್ಳಲು ಮೊದಲ ಆದ್ಯತೆ ನೀಡುವುದು. ಫಲಾನುಭವಿಗಳ ಅಗತ್ಯದ ಮೇಲೆ ಮನೆ ಕಟ್ಟಲು ನೆರವಿಗಾಗಿ ನಿಗಮದಿಂದ ಕ್ರಮ
  ಕೈಗೊಳ್ಳುವುದು.
• ಮಿತವ್ಯಯಕಾರಿ ತಂತ್ರಜ್ಞಾನಗಳ ಬಳಕೆ ಮತ್ತು ವಸತಿ ನಿರ್ಮಾಣದ ಪರಿಕಲ್ಪನೆಯನ್ನು ನಿರ್ಮಿತಿ ಕೇಂದ್ರಗಳು ನಿರ್ಮಿಸಿದ ಮಾದರಿ ಮನೆಗಳ ಮೂಲಕ ಪ್ರದರ್ಶನೆ
  ಮಾಡುವುದು.
• ನಿಗಮವು ನುರಿತ ವಿನ್ಯಾಸಗಾರರೊಂದಿಗೆ ಒಡಂಬಡಿಕೆ ಮಾಡುವುದರ ಮೂಲಕ ವೃತ್ತಿಪರ ಸೇವೆಗಳನ್ನು ವಸತಿ ವಲಯದಲ್ಲಿ ಪಡೆಯುವುದು.

ಸಾಧನೆಗಳು


1. ಜಿಪಿಎಸ್ ಮೊಬೈಲ್ ಆಧಾರಿತ ಮತ್ತು ಆನ್ಲೈನ್ ಅನುದಾನ ಬಿಡುಗಡೆಯ ಸಿಸ್ಟಮ್ ಗೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ 2013-2014 (ಚಿನ್ನ).
2. ವಿಧ್ಯುನ್ಮಾನ ಹಣ ವರ್ಗಾವಣೆಯ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ 2010-2011 (ಕಂಚು).
3. ಅತ್ಯುತ್ತಮ ಸಾಧನೆಗಾಗಿ 2002-2003ನೇ ಸಾಲಿನಲ್ಲಿ ಹುಡ್ಕೊದಿಂದ (HUDCO) ಪ್ರಶಸ್ತಿ.
4. ಅತ್ಯುತ್ತಮ ಸಾಧನೆಗಾಗಿ 2001-2002ನೇ ಸಾಲಿನಲ್ಲಿ ಹುಡ್ಕೊದಿಂದ (HUDCO) ಪ್ರಶಸ್ತಿ.
5. ಶ್ಲಾಘನೀಯ ಸಾಧನೆಗಾಗಿ 2000-2001ನೇ ಸಾಲಿನಲ್ಲಿ ಹುಡ್ಕೊದಿಂದ (HUDCO) ಪ್ರಶಸ್ತಿ.

ನಿರ್ದೇಶಕರ ಮಂಡಳಿ
ಡಾ|| ಎಮ್. ಎಚ್. ಅಂಬರೀಷ್, ,
ಮಾನ್ಯ ವಸತಿ ಸಚಿವರು, ಕರ್ನಾಟಕ ಸರ್ಕಾರ
ಹಾಗೂ ಅಧ್ಯಕ್ಷರು,
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿ,
# 1,2,3,4 ಐ.ಟಿ. ಪಾರ್ಕ್, 1ನೇ ಮಹಡಿ,
4ನೇ ಮುಖ್ಯ ರಸ್ತೆ,ರಾಜಾಜಿನಗರ ಕೈಗಾರಿಕಾ ಪ್ರದೇಶ,
ರಾಜಾಜಿನಗರ,ಬೆಂಗಳೂರು – 560 044
ದೂರವಾಣಿ: 23118888, ಫ್ಯಾಕ್ಸ್: 23145085
ಶ್ರೀ ಶಂಭು ದಯಾಳ್ ಮೀನಾ, ಭಾ.ಆ.ಸೇ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ವಸತಿ ಇಲಾಖೆ ಹಾಗೂ ನಿರ್ದೇಶಕರು
ರಾ.ಗಾ.ಗ್ರಾ.ವ.ನಿ.ನಿ.,
ವಸತಿ ಇಲಾಖೆ,
ವಿಕಾಸ ಸೌಧ,ಬೆಂಗಳೂರು – 560 001.
ದೂರವಾಣಿ: 22256356
ಶ್ರೀ ತುಷಾರ್ ಗಿರಿ ನಾಥ್ ಭಾ.ಆ.ಸೇ.
ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು,
ಕರ್ನಾಟಕ ಸರ್ಕಾರ, ಹಾಗೂ ನಿರ್ದೇಶಕರು ರಾ.ಗ್ರಾ.ವ.ನಿ.ನಿ.
ವಿಧಾನಸೌಧ,
ಬೆಂಗಳೂರು- 560001
ಶ್ರೀ. ರಿತೇಶ್. ಕುಮಾರ್ ಸಿಂಗ್, ಭಾ.ಆ.ಸೇ.
ಸರ್ಕಾರದ ಕಾರ್ಯದರ್ಶಿಗಳು (ಖರ್ಚು) ಹಾಗೂ
ನಿರ್ದೇಶಕರು, ರಾ.ಗಾ.ಗ್ರಾ.ವ.ನಿ.ನಿ.
ವಿಧಾನ ಸೌಧ,
ಬೆಂಗಳೂರು – 560 001.
ಶ್ರೀಮತಿ ಎಮ್. ವಿ. ಸಾವಿತ್ರಿ, ಭಾ.ಆ. ಸೇ
ಆಯುಕ್ತರು,
ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ದೇಶಕರು, ರಾ.ಗಾ.ಗ್ರಾ.ವ.ನಿ.ನಿ.
ವಿಕಾಸ ಸೌಧ, ಬೆಂಗಳೂರು – 560 001.
ಶ್ರೀ ವಿ. ಯಶವಂತ್, ಭಾ.ಆ.ಸೇ
ಆಯುಕ್ತರು,
ಕರ್ನಾಟಕ ಗೃಹ ಮಂಡಳಿ ಹಾಗೂ ನಿರ್ದೇಶಕರು, ರಾ.ಗಾ.ಗ್ರಾ.ವ.ನಿ.ನಿ.
ಕಾವೇರಿ ಭವನ, ಕೆ.ಜಿ. ರಸ್ತೆ,
ಬೆಂಗಳೂರು – 560 009.
ಡಾ|| ಕೆ.ಜಿ. ಜಗದೀಶ, ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿ.
# 1,2,3,4 ಐ.ಟಿ. ಪಾರ್ಕ್, 1ನೇ ಮಹಡಿ,
4ನೇ ಮುಖ್ಯ ರಸ್ತೆ,ರಾಜಾಜಿನಗರ ಕೈಗಾರಿಕಾ ಪ್ರದೇಶ,
ರಾಜಾಜಿನಗರ,ಬೆಂಗಳೂರು – 560 044
ದೂರವಾಣಿ: 23118888, ಫ್ಯಾಕ್ಸ್: 23145085
ಶ್ರೀ. ಬಿಸ್ಸೆಗೌಡ, .
ಆಯುಕ್ತರು,
ಕರ್ನಾಟಕ ಕೊಳಗೇರಿ ಅಭಿವೃದ್ದಿ ನಿಗಮ ಹಾಗೂ ನಿರ್ದೇಶಕರು,
ರಾ.ಗಾ.ಗ್ರಾ.ವ.ನಿ.ನಿ.
ಶೇಷಾದ್ರಿಪುರಂ, ಬೆಂಗಳೂರು – 560 020.
ದೂರವಾಣಿ: 22239044
ಶ್ರೀ. ಎಮ್.ವಿ. ಜಯರಾಮಯ್ಯ
ಉಪ ಪ್ರಧಾನ ವ್ಯವಸ್ಥಾಪಕರು (ಹಣಕಾಸು),
ಸ್ಥಳೀಯ ಪ್ರಧಾನ ಕಛೇರಿ – ಬೆಂಗಳೂರು,
ಹುಡ್ಕೊ ಹಾಗೂ ನಿರ್ದೇಶಕರು, ರಾ.ಗಾ.ಗ್ರಾ.ವ.ನಿ.ನಿ.,
ಮಣಿಪಾಲ ಸೆಂಟರ್, ಬೆಂಗಳೂರು.